Automobile

2026 Hyundai Exter : ಬಿಡುಗಡೆಯಾಗಿದೆ ಹುಂಡೈ ಎಕ್ಸ್‌ಟರ್ ಫೇಸ್‍ಲಿಫ್ಟ್ : ಬೆಲೆ ಎಷ್ಟು…?

ಹುಂಡೈ ಮೋಟಾರ್ ಇಂಡಿಯಾ ತನ್ನ ಜನಪ್ರಿಯ ಎಕ್ಸ್‌ಟರ್ ನ ಫೇಸ್‍ಲಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 2026 ಹುಂಡೈ ಎಕ್ಸ್‌ಟರ್ ಫೇಸ್‍ಲಿಫ್ಟ್ ನ ಎಕ್ಸ್‌ಶೋರೂಮ್ ಬೆಲೆ 5.79 ಲಕ್ಷ ರೂಪಾಯಿಯಿಂದ 9.41 ಲಕ್ಷ ರೂಪಾಯಿ ತನಕ ಇದೆ. ಆಸಕ್ತ ಗ್ರಾಹಕರು ಹೊಸ ಎಕ್ಸ್‌ಟರ್ ಅನ್ನು ಆನ್‍ಲೈನ್‍ನಲ್ಲಿ ಅಥವಾ ಅವರ ಹತ್ತಿರದ ಡೀಲರ್‌ಶಿಪ್‌ಗಳಲ್ಲಿ ಬುಕ್ ಮಾಡಬಹುದು. ಈ ತಿಂಗಳ ಅಂತ್ಯದ ವೇಳೆಗೆ ಈ ಎಸ್‍ಯುವಿಯ ವಿತರಣೆ ಆರಂಭವಾಗುವ ನಿರೀಕ್ಷೆ ಇದೆ.

ಹುಂಡೈ ಎಕ್ಸ್‌ಟರ್ ಮೈಕ್ರೋ ಎಸ್‍ಯುವಿ 2023ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ಬಿಡುಗಡೆಯಾಗಿರುವುದು ಇದರ ಮೊದಲ ಫೇಸ್‍ಲಿಫ್ಟ್ ಆಗಿದೆ. ಇದು ಹಲವು ಕಾಸ್ಮೆಟಿಕ್ ಅಪ್‍ಡೇಟ್‍ಗಳು, ಹೊಸ ವೈಶಿಷ್ಟ್ಯಗಳು, ವರ್ಧಿತ ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಆರು ವೇರಿಯಂಟ್‍ಗಳಲ್ಲಿ ಈ ಕಾರು ಸಿಗಲಿದೆ.


2026 ಹುಂಡೈ ಎಕ್ಸ್‌ಟರ್ 1.2-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್‍ನೊಂದಿಗೆ 83 ಎಚ್‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು ಮ್ಯಾನುವಲ್ ಹಾಗೂ ಎಎಂಟಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.

ಈ ಮೈಕ್ರೋ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‍ಗಳೊಂದಿಗೆ ನೇರವಾಗಿ ಸ್ಪರ್ಧಿಸುವುದನ್ನು ಮುಂದುವರೆಸಿದೆ.

Show More

Related Articles

Leave a Reply

Your email address will not be published. Required fields are marked *

Back to top button