2026 Hyundai Exter : ಬಿಡುಗಡೆಯಾಗಿದೆ ಹುಂಡೈ ಎಕ್ಸ್ಟರ್ ಫೇಸ್ಲಿಫ್ಟ್ : ಬೆಲೆ ಎಷ್ಟು…?
ಹುಂಡೈ ಮೋಟಾರ್ ಇಂಡಿಯಾ ತನ್ನ ಜನಪ್ರಿಯ ಎಕ್ಸ್ಟರ್ ನ ಫೇಸ್ಲಿಫ್ಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹೊಸ 2026 ಹುಂಡೈ ಎಕ್ಸ್ಟರ್ ಫೇಸ್ಲಿಫ್ಟ್ ನ ಎಕ್ಸ್ಶೋರೂಮ್ ಬೆಲೆ 5.79 ಲಕ್ಷ ರೂಪಾಯಿಯಿಂದ 9.41 ಲಕ್ಷ ರೂಪಾಯಿ ತನಕ ಇದೆ. ಆಸಕ್ತ ಗ್ರಾಹಕರು ಹೊಸ ಎಕ್ಸ್ಟರ್ ಅನ್ನು ಆನ್ಲೈನ್ನಲ್ಲಿ ಅಥವಾ ಅವರ ಹತ್ತಿರದ ಡೀಲರ್ಶಿಪ್ಗಳಲ್ಲಿ ಬುಕ್ ಮಾಡಬಹುದು. ಈ ತಿಂಗಳ ಅಂತ್ಯದ ವೇಳೆಗೆ ಈ ಎಸ್ಯುವಿಯ ವಿತರಣೆ ಆರಂಭವಾಗುವ ನಿರೀಕ್ಷೆ ಇದೆ.
ಹುಂಡೈ ಎಕ್ಸ್ಟರ್ ಮೈಕ್ರೋ ಎಸ್ಯುವಿ 2023ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ಬಿಡುಗಡೆಯಾಗಿರುವುದು ಇದರ ಮೊದಲ ಫೇಸ್ಲಿಫ್ಟ್ ಆಗಿದೆ. ಇದು ಹಲವು ಕಾಸ್ಮೆಟಿಕ್ ಅಪ್ಡೇಟ್ಗಳು, ಹೊಸ ವೈಶಿಷ್ಟ್ಯಗಳು, ವರ್ಧಿತ ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಆರು ವೇರಿಯಂಟ್ಗಳಲ್ಲಿ ಈ ಕಾರು ಸಿಗಲಿದೆ.
Meet the new Hyundai EXTER. Bolder design, smarter tech, stronger safety. Built to stand out, wherever you go.
Drive to Shine. Bookings open. #Hyundai #HyundaiIndia #HyundaiEXTER #DriveToShine pic.twitter.com/ZaavNY5GY3
— Hyundai India (@HyundaiIndia) March 20, 2026
2026 ಹುಂಡೈ ಎಕ್ಸ್ಟರ್ 1.2-ಲೀಟರ್ ಫೋರ್-ಸಿಲಿಂಡರ್ ಪೆಟ್ರೋಲ್ ಎಂಜಿನ್ನೊಂದಿಗೆ 83 ಎಚ್ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಹೊರಹಾಕುತ್ತದೆ. ಇದನ್ನು ಮ್ಯಾನುವಲ್ ಹಾಗೂ ಎಎಂಟಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ.
ಈ ಮೈಕ್ರೋ ಎಸ್ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಸುಜುಕಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ಗಳೊಂದಿಗೆ ನೇರವಾಗಿ ಸ್ಪರ್ಧಿಸುವುದನ್ನು ಮುಂದುವರೆಸಿದೆ.



