ಮೋಹನ್‍ಲಾಲ್ ಅಭಿನಯದ `ದೃಶ್ಯಂ 3′ ಚಿತ್ರದ ಟೀಸರ್ ರಿಲೀಸ್ : ಸಿನಿಮಾ ಬಿಡುಗಡೆಗೂ ಮುಹೂರ್ತ ಫಿಕ್ಸ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‍ಲಾಲ್ ಅಭಿನಯದ `ದೃಶ್ಯಂ 3′ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದು ಜಾರ್ಜ್‍ಕುಟ್ಟಿಯ ಜೀವನದ ಮತ್ತೊಂದು ಅಧ್ಯಾಯವನ್ನು ತೆರೆದಿಡುತ್ತದೆ. 1 ನಿಮಿಷ 50 ಸೆಕೆಂಡುಗಳ ಟೀಸರ್ ಮೋಹನ್ ಲಾಲ್ ಅವರ ಧ್ವನಿಮುದ್ರಿಕೆಯೊಂದಿಗೆ ಪ್ರಾರಂಭವಾಗುತ್ತದೆ.
#Drishyam3 Official Teaserhttps://t.co/vdOJ8enhTj
Worldwide Release | May 21st 2026@jeethu4ever @antonypbvr @KumarMangat @jayantilalgada @AbhishekPathakk #MeenaSagar@aashirvadcine @PanoramaMovies @PenMovies @ram_rampagepix #RavindraAuti @Rajeshmenon1969 @Abh1navMehrotra… pic.twitter.com/HmetQtapKz
— Mohanlal (@Mohanlal) April 29, 2026
ಸಹಜವಾಗಿಯೇ ಈ ಸಸ್ಪೆನ್ಸ್ ಚಿತ್ರ ಸರಣಿ ಕುತೂಹಲ ಮೂಡಿಸಿದೆ. ಜೀತು ಜೋಸೆಫ್ ನಿರ್ದೇಶನದ ಮತ್ತು ಆಂಥೋನಿ ಪೆರುಂಬವೂರ್ ನಿರ್ಮಿಸಿದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಯಿತು.
2013 ರಲ್ಲಿ ದೃಶ್ಯಂ ಬಿಡುಗಡೆಯಾಗಿದ್ದರೆ, 2021ರಲ್ಲಿ ದೃಶ್ಯಂ 2 ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಗಳಿಸಿತ್ತು. ಇದೀಗ ದೃಶ್ಯಂ 3 ಮೇ 21 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

